![](http://3.bp.blogspot.com/_G9ioErfmHsA/SRA87gZOVrI/AAAAAAAAAX4/sljXC2KcVUM/s320/sad1.jpg)
ಕಣ್ಣೀರಲ್ಲೆ ನನ್ನ ಹುಡುಕಬೇಡ ಗೆಳೆಯಾ..
ನಿನ್ನ ಕಣ್ಣಲ್ಲೆ ಇರುವೆ ನಾ...
ನಮ್ಮಿಬ್ಬರ ಮಿಲನ ಆಗುವುದೇ ಆದರೆ ...
ನೀನು ಕಣ್ಣ ಮುಚ್ಚಿದೊಡನೆ ನಾ ಓಡಿ ಬರುವೆ...
ಈ ಕ್ಷಣ, ಯುಗವಾಗಿ ಕಳೆಯುವ ಮೊದಲು..
ಒಂದೆರೆಡು ಪ್ರೀತಿಯ ಮಾತುಗಳನ್ನು ಆಡೆಯಾ??
ನಾಳೆಯ ಬಗ್ಗೆ ನನಗೆ ನಂಬಿಕೆಯಂತು ಇಲ್ಲಾ...
ನಿನ್ನ ಮಾತುಗಳನ್ನು ಇಂದೆ ಆಡಿ ಮುಗಿಸೆಯಾ??
ನಿನ್ನ ಬಿಟ್ಟಿರದ ಈ ಮನ,ಇಂದೆಕೋ ಮೌನ...
ಸಾವಿರ ಜನಗಳು ಮದ್ಯೆ,ಕಾಡಿಹದು ಒಂಟಿತನ..
ಹತ್ತಿರ ಬಂದವರು ದೂರ ಸರಿಯುತಿಹರು...
ನಿನ್ನ ನೆನಪೊಂದೆ ನನ್ನ ಹೀಗೆ ಕಾಡುತಿಹದು....
ಎಂದಾದರು ನಿನ್ನ ನಾ ಮರೆಯುವೆ ಎಂದುಕೊಂಡೆ...
ಗೊತ್ತಿಲ್ಲದ ರೀತಿಯಲೇ ನಿನ್ನ ದಾರಿಯಲಿ ನಡೆದುಬಂದೆ..
ಹಿಂತಿರುಗಿ ಹೋಗುವ ಮನಸ್ಸಾಗುತ್ತಿದೆ ಇಂದು...
ಅಂತಿಮ ಸಮಯದಲಿ ಕರೆದ್ಯೊಯಲು ಬಂದಿಹೇ ನೀನು.....
7 comments:
entlesಈ ಕ್ಷಣ, ಯುಗವಾಗಿ ಕಳೆಯುವ ಮೊದಲು..
ಒಂದೆರೆಡು ಪ್ರೀತಿಯ ಮಾತುಗಳನ್ನು ಆಡೆಯಾ??
ನಾಳೆಯ ಬಗ್ಗೆ ನನಗೆ ನಂಬಿಕೆಯಂತು ಇಲ್ಲಾ...
ನಿನ್ನ ಮಾತುಗಳನ್ನು ಇಂದೆ ಆಡಿ ಮುಗಿಸೆಯಾ??
bahala arthapoorna saalugalu.. mana kadaduvantha preetiya binnaha...
wonderful poem...
ಸೊಗಸಾಗಿದೆ ನಿಮ್ಮ ಕವನ ಮತ್ತು ನಿಮ್ಮ ರೇಖಾ ಚಿತ್ರವಂತೂ ನನಗೆ ತುಂಬಾ ಇಷ್ಟವಾಯಿತು. ನಾನು ಛಾಯಾಗ್ರಹಕನಾದ್ದರಿಂದ ನನಗೆ ಚಿತ್ರಗಳು, ಫೋಟೋಗಳು ಇಷ್ಟ. ನಾನು ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ.
ಆಹಾಂ! ನಾನು ಛಾಯಾಗ್ರಹಕನೂ ಕೂಡ. ನನ್ನ ಮತ್ತೊಂದು ಬ್ಲಾಗಿಗೆ ಬನ್ನಿ ಅಲ್ಲಿ ಫೋಟೋಗಳು ಮತ್ತು ಲೇಖನಗಳು ಇದೆ. ನಿಮಗಿಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com/
beautiful..!
So Chweetu ನಿಮ್ ಕವನ, ಚಿತ್ರವೂ..ಮತ್ತಷ್ಟು ಬರೆಯಿರಿ.
-ಚಿತ್ರಾ
ನಾಳೆಯ ಬಗ್ಗೆ ನನಗೆ ನಂಬಿಕೆಯಂತು ಇಲ್ಲಾ...
ನಿನ್ನ ಮಾತುಗಳನ್ನು ಇಂದೆ ಆಡಿ ಮುಗಿಸೆಯಾ??
chennagide ee saalugaLu...
mana muttuva maatu ...
:):)
Post a Comment