
ನೆನಪು ಕಾಡಿದೆ ಅವಳದೇ ಇಂದು
ಎಂದು ಇಲ್ಲದ ಪ್ರೀತಿ ಉಕ್ಕಿದೆ ಇಂದು
ಆ ಹವಳದ ತುಟಿಗಳಒಳಗೆ ಆ ಮುತ್ತಿನ ಸಾಲುಗಳು
ಆ ಸಂಪಿಗೆಯಂತ ನಾಸಿಕದಲ್ಲಿನ ಬಂಗಾರದ ಮೂಗುತಿ
ಆಗಸವೇ ಅಸೂಯೇ ಪಡುವಂತ ಆ ನೀಲಿ ಕಣ್ಣುಗಳು
ಎಂತವರಿಗೂ ಮೋಹ ಹುಟ್ಟಿಸುವ ಆ ಕಾಮನ ಬಿಲ್ಲಿನ ಹುಬ್ಬುಗಳು…
ವರ್ಣಿಸಿದರೂ ಮುಗಿಯದ ಅವಳ ದೇಹದ ಮೈಮಾಟ
ಬ್ರಹ್ಮ,ಕಾಮನ ಜೊತೆಗೂಡಿ ಆಡಿದ ಆಟ
ಆ ತುಂಬು ದೇಹದ ಕೆಳಗೆ ಬಳ್ಳಿಯಂತಹ ನಡು
ಅಪ್ಸರೆಯರಿಗಂತೂ,ನಡುಕ ಹುಟ್ಟಿಸದೆ ಬಿಡದು.
ನಡೆದು ಬರುತ್ತೀರೆ ಅವಳು ರಂಬೆ,ಉರ್ವಶಿಯಂತೆ
ಬಂದಳು ಎನ್ನ ಅಂಗಳಕೆ ವರ್ಷಧಾರೆಯಂತೆ
ಅವಳು ತೋರಿದಪ್ರೀತಿಯಲಿ ನಾ ನೆನೆದು ಅಂದು
ಮಾಯಾಜಿಂಕೆಯಾದಳು ಮತ್ತೆ ಸಿಗುವೆನೆಂದು.
ನೆನಪು ಕಾಡಿದೆ ಅವಳದೇ ಇಂದು
ಎಂದು ಇಲ್ಲದ ಪ್ರೀತಿ ಉಕ್ಕಿದೆ ಇಂದು
