Monday, September 13, 2010

ಪ್ರೇಮ ಪತ್ರ


ನನ್ನವಳಲ್ಲದ ನನ್ನವಳಿಗೆ ಬರೆದ ಈ ಪ್ರೇಮ ಪತ್ರ

ಮನದಾಳದ ತುಮುಲಗಳ ಒಂದುಗೂಡಿಸಿ
ದಿನಕೊಮ್ಮೆಯಾದರು ನಿನ್ನ ನೋಡಬಯಸಿ
ಆಗದೆಂದು ನೀ ನನ್ನಿಂದ ದೂರಸರೆದ
ಕಾರಣವ ಕೇಳಲೆಂದು ಬರೆದ ಈ ಪತ್ರ

ನಿನ್ನ ನೋಡದಿದ್ದರೇನು ದನಿ ಕೇಳಲೆಂದು
ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿ
ನನ್ನ ಕಾಡಬೇಡ ಹೇಳಿದ್ದು ನೆನಪಾಗಿ
ಕಾರಣವ ಕೇಳಲೆಂದು ಬರೆದ ಈ ಪತ್ರ

ಇನ್ನು ನಿನ್ನ ನೋಡುವುದಿಲ್ಲ,ಕಾಡುವುದಿಲ್ಲ
ಪ್ರೀತಿಯ ಆಸೆಗೆ ಹಂಬಲಿಸುವುದಿಲ್ಲ
ಎಲ್ಲೊ ಮನಸಿನ ಪ್ರಶ್ನೆ ಕೇಳಲೆಂದು
ನನ್ನವಳಲ್ಲದ ನನ್ನವಳಿಗೆ ಬರೆದ ಈ ಪ್ರೇಮ ಪತ್ರ

ಪ್ರೀತಿಯ ಗೂಡು


ಮನದ ಮೂಲೆಯಲಿ
ಪುಟ್ಟದಾದ ಒಂದು ಗೂಡು ಕಟ್ಟಿ
ಕರೆದೆ ನಿನ್ನ ಪ್ರೀತಿಯ ಕನಸು ಹೆಣೆಯಲು ..

ನಿನ್ನ ಅಂತರಂಗದ ಆಸೆಗಳ
ಜೊತೆಗೂಡಿಸಿ, ಬಣ್ಣವೆಂಬ ಬದಕು ಬೆರಸಿ
ಅರಳಲಿ ನಮ್ಮ ಪ್ರೀತಿಯ ಹೂ ಅಲ್ಲಲ್ಲಿ
ಮಧ್ಯ ನೆನಪಿನ ಪಿಸಿಮಾತಿನ ಸೋನೆ
ನಲ್ಲೆ ಕೊಟ್ಟ ಬಿಸಿ ಮುತ್ತಿನ ಮಾಲೆ..

ಇನ್ನು ಎಷ್ಟು ಆಡಿದರು ಸಾಕಗಿರಲಿಲ್ಲ..
ಮಾತು, ಪ್ರೀತಿಯೆಂಬ ಆರಿದ್ರ ಮಳೆಗೆ ಬರವಿರಲಿಲ್ಲ..
ದಿನಕೊಮ್ಮೆ ಆಗಲೋ ಇಗಲೋ ಒಮ್ಮೆ ಹುಸಿಮುನಿಸು
ಮಾತನಾಡಲಾಗಂಥಹ ಬಿಗು ಮೌನ..ಮತ್ತೆ ವಿರಾಮ.

ಈ ಕನಸಿನ ಗೂಡಿಗೆ ಎಲ್ಲಿಂದಲೋ ಬಿತ್ತು ಬೆಂಕಿ
ಪ್ರಶ್ನೆ ಉತ್ತರದ ಪರಿವೆ ಇಲ್ಲದ ಆ ಮಾತುಗಳ ಕಿಡಿ
ನಿಶ್ಯಬ್ಧ, ನಿಟ್ಟುಸಿರು,ಮತ್ತೆ ಮೌನವಾದ ಹನಿಕೂಡಿದ ಕಣ್ಣುಗಳು
ಕನಸಿನ ಗೂಡ ಹೆಣೆಯಲು ಬೇಸೆತ್ತ ಹೃದಯಗಳು ..

ಮನದ ಅಂಗಳದಲಿ ಅಲ್ಲಲ್ಲಿ ಬಿದ್ದ ಆಸೆಗಳು
ಎತ್ತಿ ಮತ್ತೆ ಹೊಸೆಯಲು ಆಗದ ನಿಷ್ಪ್ರಯೋಜಕ ಕನಸುಗಳು
ಒಮ್ಮೆಯಾದರು ಹಿಂತಿರುಗಿ ಬಾ ಕಾಯುವೆ ಎಂಬ ಮಾತುಗಳು
ದಿನ ದಿನವು ಹೆಚ್ಚಿದ ಬೆಂಕಿಯ ಜ್ವಾಲೆಯಂಥ ನೆನಪುಗಳು ......

Friday, September 10, 2010

ಈ ಒಡೆದ ಹೃದಯ


ನೀ ಹೇಗೆ ನನ್ನ ಮರೆತೇ ಚೆಲುವೆ...
ನನ್ನ ಪ್ರಾಣಕ್ಕಿಂತ ಹೆಚ್ಚಾಗಿದ್ದೆ ನೀನು..

ನೀ ಹೋದ ಕ್ಷಣಗಳು ನೆನಪಾಗಿ ಕಾಡುತಿದೆ
ಕಹಿಯಾಗಿ,ಬಿಡದ ವಿಷವಾಗಿ,ಕೊರಿಯುತಿದೆ
ನನ್ನ ಹೃದಯವ ಕಡಲಂಚಿನ ಬಂಡೆಯಂತೆ...

ನಿನ್ನ ನೆನಪಿನಲೆ ಕರಗುತಿದೆ ಜೀವದ ಮೇಣ...
ಕಣ್ಣಂಚಿನ ನೆನಪಿನಲಿ ಧಾರೆ,ಮುಖದಲ್ಲಿ ನಗು ಕಾಣ...
ತಡೆದರು ನಿಲ್ಲದೇ ದಾಳಿ ಮಾಡ್ತೀವೆ ನಿನ್ನ ನೆನಪಿನ ಬಾಣ..

ನೊಂದಿದೆ ಹೃದಯ,ಬೆಂದಿದೆ ಮನಸ್ಸು ಆದರೂ
ನಿನ್ನ ಸುಖವನ್ನೇ ಬಯಸುತಿದೆ ಈ ಜೀವ
ಏನೇ ಆಗಲಿ...ಬಿಟ್ಟು ಬಿಡು ಈ ಜೀವದ ಗೊಡವೆ...

ನನ್ನ ಎದೆಯ ಬಿಸಿ ಉಸಿರು ತಟ್ಟದಿರಲಿ ನಿನಗೆ
ಕಹಿ ನೆನಪಾಗಿಯೂ ಬರದಿರಲಿ ನಾನು ನಿನ್ನೊಳಗೆ
ನೋಯಬಾರದು ನಾನು ಮೆಚ್ಚಿದ ಹೃದಯ,ಇನ್ನಷ್ಟು ಹಾಳಾದರು ಈ ಒಡೆದ ಹೃದಯ...

ನಿನ್ನ ಹೆಸರು


ನಗುವ ನಿನ್ನ ಮುಖ ಕಂಡೊಡನೆ
ಚಂದಿರನು ನಾಚುವನು ತನ್ನೊಳಗೆ
ಹೂವನ್ನು ನಾಚಿಸುವೆ ಚೆಲುವೆ ಹೇಳಿ ಬಿಡು ನಿನ್ನ ಹೆಸರು

ಚಂದ್ರ ,ತಾರೆಗಳ ಬೆಳಕು ನಿನ್ನ ಕಣ್ಣಗಳು
ನನ್ನ ನೋಡಿ ಹಾಗೆ ಮಿನುಗುತಿರಲು
ಗೊತ್ತಾಯಿತು ಚೆಲುವೆ ಆ ಬೆಳಕೆ ನಿನ್ನ ಹೆಸರು

ಬೆಳದಿಂಗಳ ರಾತ್ರಿಯಲಿ ನನ್ನ ಮನದಂಗಳದಲಿ
ಬೆಳಗುತಿರುವ ನಿನ್ನ ನಗು ಮುಖದ ಛಾಯೆ
ಮೆದುದನಿಯಲಿ ಕಿವಿಯಲಿ ಉಸಿರು ಬಿಡು ನಿನ್ನ ಹೆಸರು

ನಸುಕಿನಲಿ ಕಿರಣಗಳ ಕಂಡು ನಗುವ ಕುಸುಮದ ಹಾಗೆ
ಸಂಜೆ ತಂಪಿನ ಸಾಗರದ ಪ್ರತಿ ಅಲೆಅಲೆ ಹಾಗೆ
ನವಿಲಗರಿಯ ನೂರಾರು ಬಣ್ಣದ ಹಾಗೆ
ನನ್ನ ಹೄದಯದ ಪ್ರತಿ ಕೋಣೆಯಲ್ಲೂ ಬರೆದುಬಿಡು ನಿನ್ನ ಹೆಸರು