Tuesday, November 4, 2008

ಕಾಡಿದೆ ಅವನ ನೆನಪು....


ಕಣ್ಣೀರಲ್ಲೆ ನನ್ನ ಹುಡುಕಬೇಡ ಗೆಳೆಯಾ..
ನಿನ್ನ ಕಣ್ಣಲ್ಲೆ ಇರುವೆ ನಾ...
ನಮ್ಮಿಬ್ಬರ ಮಿಲನ ಆಗುವುದೇ ಆದರೆ ...
ನೀನು ಕಣ್ಣ ಮುಚ್ಚಿದೊಡನೆ ನಾ ಓಡಿ ಬರುವೆ...

ಈ ಕ್ಷಣ, ಯುಗವಾಗಿ ಕಳೆಯುವ ಮೊದಲು..
ಒಂದೆರೆಡು ಪ್ರೀತಿಯ ಮಾತುಗಳನ್ನು ಆಡೆಯಾ??
ನಾಳೆಯ ಬಗ್ಗೆ ನನಗೆ ನಂಬಿಕೆಯಂತು ಇಲ್ಲಾ...
ನಿನ್ನ ಮಾತುಗಳನ್ನು ಇಂದೆ ಆಡಿ ಮುಗಿಸೆಯಾ??

ನಿನ್ನ ಬಿಟ್ಟಿರದ ಈ ಮನ,ಇಂದೆಕೋ ಮೌನ...
ಸಾವಿರ ಜನಗಳು ಮದ್ಯೆ,ಕಾಡಿಹದು ಒಂಟಿತನ..
ಹತ್ತಿರ ಬಂದವರು ದೂರ ಸರಿಯುತಿಹರು...
ನಿನ್ನ ನೆನಪೊಂದೆ ನನ್ನ ಹೀಗೆ ಕಾಡುತಿಹದು....

ಎಂದಾದರು ನಿನ್ನ ನಾ ಮರೆಯುವೆ ಎಂದುಕೊಂಡೆ...
ಗೊತ್ತಿಲ್ಲದ ರೀತಿಯಲೇ ನಿನ್ನ ದಾರಿಯಲಿ ನಡೆದುಬಂದೆ..
ಹಿಂತಿರುಗಿ ಹೋಗುವ ಮನಸ್ಸಾಗುತ್ತಿದೆ ಇಂದು...
ಅಂತಿಮ ಸಮಯದಲಿ ಕರೆದ್ಯೊಯಲು ಬಂದಿಹೇ ನೀನು.....

Saturday, November 1, 2008

ಸಂಜೆ...




ನೇಸರನ ಗಲ್ಲಕೆ ಮುತ್ತಿಕ್ಕುವ ಆ ಬೆಟ್ಟದ ತುದಿ
ಅದ ಸವಿದು ನೇಸರನ ಕಣ್ಣು ಕೆಂಪಾಗಿ...
ಸಿಟ್ಟಿನಲಿ ತಾ ಹೊರಟಿಹನು ತನ್ನ ಮನೆಯೆ ಕಡೆಗೆ...
ಇದನರಿತು ಹಕ್ಕಿಗಳು ತವಕದಲಿ ಗೂಡ ಸೇರತೀರಲು....

ಗೋಧೂಳಿಯ ಸಮಯದ ಧೂಳು ಎದ್ದಿರಲು
ಕೊಳಲನುದುತಾ ಅವ ತನ್ನ ಗೋಗಳ ಕರೆದಿರಲು...
ಸಂಜೆಗೆಂಪು ಬಣ್ಣದಲಿ ಅವಳ ಮಲ್ಲೆ ಕಂಪು ಹರಡಿರಲು...
ನಲ್ಲನ ಅಗಲಿಕೆಯ ದು:ಖದಲಿ ಸೂರ್ಯಕಾಂತಿ ತಾ ಸೋತಿರಲು...

ಹಕ್ಕಿಗಳ ಕಲರವದಲಿ ಸಖಿಯ ಹಾದಿಯ ಅವ ಕಾದಿರಲು
ಅವಳು ಕರೆದ ಹೆಸರು ಕೋಗಿಲೆ ದನಿಯ ಮೀರಿಸಿರಲು...
ತಿರುಗಿ ತಾ ನೋಡಲು ಸಖಿಯ ಗಲ್ಲದಲಿ ಕೆಂಪು ಮುಡಿರಲು...
ಅವಳ ಸನಿಹ ಸುಖ ಬಯಸಿ ಹೋಗಿರಲು ಅಲ್ಲಿಗೆ ಕತ್ತಲಾಗಿತ್ತು...

ನೆನ್ನೆಯ ಸವಿಯ ನೆನೆದು ನೇಸರನು ಖುಷಿಯಲಿ ತಾ ಬರಲು..
ಮರಿಗಳ ಹಸಿವು ನೀಗಿಸಲು ಹಕ್ಕಿಗಳು ಹೋರಟಿರಲು...
ನಲ್ಲ ಬರುವುದ ಅರಿತು ಹೂ ಮತ್ತೆ ಸಿಂಗಾರಗೊಂಡಿರಲು...
ಅವಳ ಅದರ ಸವಿದ,ಸಖ ಮತ್ತೆ ಭ್ರಮರವಾಗಿ ಸುತ್ತುತಿಹನು....

Saturday, October 25, 2008

ಪ್ರೀತಿ ಅಂದ್ರೆ ಇದೇನಾ !!??...


ಈ ಪ್ರೀತಿ.. ಪ್ರೇಮಾ.... ಅನ್ನೋದರ ಬಗ್ಗೆ ನನಗೆ ಅಷ್ಟು ಒಲವು ಇಲ್ಲಾ ಅನ್ನೋದ್ಕಿಂತಾ ನನಗದು ಗೊತ್ತಿಲ್ಲ....ಈ ಮೊದಲ ನೋಟದಲ್ಲೆ ಪ್ರೇಮ ಹುಟ್ಟಿತು..ಇದು ನನ್ನ ತಲೆಗೆ ಇನ್ನು ಅರ್ಥವಾಗದ ವಿಚಾರ..ಗೊತ್ತಿಲ್ಲದ ಒಂದು ಮುಖ ಅಹ್ದೇಗೆ ಇಷ್ಟ ಆಗುತ್ತೆ??ನನಗೆ ಈ ಪ್ರೀತಿ ಅನ್ನೋದು ಒಂದು ರೀತಿಯ ಆರ್ಕಷಣೆ ಅಂತಾ ಅನ್ನಿಸುತ್ತದೆ.... ನಮ್ಮ ಸುತ್ತ-ಮುತ್ತಲಿನ ಅದೇಷ್ಟೋ ಜನಗಳ ಮದ್ಯೆ ಒಂದು ಜೀವಕ್ಕೆ ಮಾತ್ರ ಮನ ಸೋಲೋದು ಅಂದ್ರೆ.....ಅದೇ ಪ್ರೀತಿನಾ??

ಹೀಗೆ ನನ್ನ ಗೆಳತಿ ಹೇಳಿದ್ಲು, I'm in Love... ನನಗೆ ಒಂದು ನಿಮಿಷ ಏನು ಹೇಳಬೇಕು ಅಂತಾ ಗೊತ್ತಾಗಲಿಲ್ಲ....ಆದ್ರೂ congrats ಅಂದೆ...ಅದ ಕೇಳಿ ಅವನು ಇನ್ನು ಒಪ್ಪಿಲ್ಲಾ...ಅಂತಾ ಸಣ್ಣ ದ್ವನಿಯಲ್ಲಿ ಹೇಳಿದಾಗ... ನನಗೆ ಇಂತಾ ಒಳ್ಳೆ ಹುಡಗಿನಾ ಯಾಕ್ ಒಪ್ಪಕೊಂಡಿಲ್ಲಾ?? ಅನ್ನೋ ಪ್ರಶ್ನೆ ತಲೆಯೊಳಗೆ ಬಂತು....
ಅವಳ ಮಾತಾಡೋ ರೀತಿ ನೋಡಿ/ಕೇಳಿ ಗೆಳತನ ಬಯಸಿದ್ದು ಇನ್ನು ನನಗೆ ನೆನಪಿದೆ...ಈ ದಿನ ಪೂರ್ತಿ ಅವನ ಬಗ್ಗೆ ಹೇಳಿದಾಗ ನನಗೆ ಅವನ ಮೇಲೆ ಸಿಟ್ಟು ಬಂತು... ಆದರೂ ಅವಳಿಗೆ ಹೇಳೊ ಮನಸ್ಸು ಮಾಡಲಿಲ್ಲಾ... (ಇದನ್ನು ಓದಿ...ಬೈತಾಳೆ ಅಂತಾ ಮಾತ್ರ ಗೊತ್ತು).... ಕೊನೆಗೆ ಆ ಸಿಟ್ಟು ಮಾಯವಾಗಿ ಇವಳ ಮೇಲೆ ಕನಿಕರ ಬಂತು...ಅವಳ ಮೌನ ನನಗೂ ಬಂತು...ಆದರೂ ಮನಸ್ಸಿನಲ್ಲಿ ಇವಳು ಹೇಳೂ ರೀತಿಯಲ್ಲಿ ಹೇಳಿಲ್ಲಾ... ಯಾವಾಗಲೋ ನಗುತ್ತಾ,ಜೋಕ್ ಮಾಡುತ್ತ ಈ ವಿಷಯ ಹೇಳಿರ್ತಾಳೆ ಅನಿಸಿತು.ಅವನ ಬಗ್ಗೆ ಹೇಳುತ್ತಿರುವಾಗ ನನಗೆ ಇವಳ ಮೇಲೆ ಸಿಟ್ಟು...ಅವನಿಗೂ ನನ್ನ ಮೇಲೆ ಪ್ರೀತಿ ಇದೆ ಅಂತಾ ತನಗೆ ತಾನೆ ಹೇಳುವಾಗಲಂತೂ ಫೊನ್ ಕಟ್ ಮಾಡೋ ಅಷ್ಟು ನಿರಾಸಕ್ತಿ...ಅವನು ನನ್ನ ಹತ್ತಿರ ಪ್ರೀತಿಯಿಂದ ಮಾತಾಡ್ತಾನೆ..ಆದ್ರೆ ಪ್ರೀತಿ ಅಂದ್ರೆ ಗೊತ್ತಿಲ್ಲಾ ಅಂತ್ತಾನೆ...ಹೇಗಾದರೂ ಮಾಡಿ ಒಪ್ಪಿಸುತ್ತೀನಿ..ಇಲ್ಲಾ ಅಂದ್ರೆ ಮುಂದೆ ಗೊತ್ತಿಲ್ಲಾ ಅಂತಾ ಹೇಳೊವಾಗ ನಾನು ಫೊನ್ ಹಿಡಿದ್ಕೊಂಡಿರೋ ಕಿವುಡ.....ನಾನು ಇನ್ನು ಸ್ವಲ್ಪ ಚೆನ್ನಾಗಿ ಇದ್ದಿದ್ರೆ ಇಷ್ಟಪಡತ್ತಿದ್ದೇನೊ ಅಂದಾಗ...ಪ್ರೀತಿ ಅಂದ್ರೆ ಏನು?? ಪ್ರೀತಿ ಅನ್ನೋದು ಬರಿ ದೈಹಿಕ ಆರ್ಕಷಣೆನಾ?? ಅಥವಾ ಎರಡು ಮನಸ್ಸಿನ ಒಂದು ಮಾಡುವ ಶಕ್ತಿನಾ?? ಪ್ರೀತಿ ಬರಿ ಆರ್ಕಷಣೆ ಆಗಿದ್ದರೆ... ಲೈಲಾ ಮಜ್ನು ಪ್ರೀತಿಗೆ ಎನ್ ಅಂತಾ ಕರಿಯೋದು?? ಲೈಲಾ ಕುರುಪಿ....ಮಜ್ನು ಕುಬ್ಜ , ಭಿಕಾರಿ....ಆದರೂ ಜನ ತಮ್ಮ ಪ್ರೀತಿನ ಅವರ ಪ್ರೀತಿಗೆ ಹೋಲಿಸುತ್ತಾರೆ.ಅವರ ಹಾಗೆ ನಾವು ಅಂತಾರೆ.....

ನಾನು ನೋಡಿದ ಒಂದು ಅಪರೂಪದ ಪ್ರೀತಿ..ಸಂಜಯ ಅವರದು... ಒಳ್ಳೇ ಕೆಲಸ ...ನೋಡಲು ಸುರಧ್ರುಪಿ...ಹಣವಂತ...ಒಮ್ಮೆ ಅವರ ಮನೆಗೆ ಗೋವಿಂದಾಚಾರ್ಯ ಜೊತೆ ಹೋಗಿದ್ದೆ... ಅವರ ತಮ್ಮನ ಮದುವೆ ಅಂತಾ...ಆಚಾರರೇ ಮದುವೆ ಪುರೋಹಿತ ಆದ್ದರಿಂದ ಮದುವೆಗೆ ಬೇಕಾದ list ಕೊಡಲು ಹೋಗಿದ್ದ್ವಿ...ನಾವು ಹೋದ ಕೂಡಲೆ...ಅವರ ೩ ವರ್ಷದ ಮಗಳು ಓಡಿ ಬಂದು.. ಅಪ್ಪ......ಅಮ್ಮ ಕರಿತ್ತಾಳೆ ಅಂದ್ಲು...ಅವರ ಮಗಳ ಮುಖ ನೋಡಿ ಏನೋ ಒಂದು ಖುಷಿ...ಆದರೆ ಆ ಖುಷಿ ೨ ನಿಮಿಷದಲ್ಲಿ ಮಾಯ... ಸಂಜಯ ಯಾರನ್ನೋ ಎತ್ತಿಕೊಂಡು ಬಂದರು...ಅದು ಅವರ ಹೆಂಡತಿ...ಅಂಗವಿಕಲೆ....ಅವರ ಕಾಲುಗಳೇ ಇರಲಿಲ್ಲಾ...ಅವರು ನಗುತ್ತಾ ಎಲ್ಲರೊಡನೆ ಮಾತಾಡುತ್ತಿದ್ದರೆ ನನಗೆ ಅವರನ್ನು ನೋಡಿ ನನ್ನ ನಗು ಮುಖದಲ್ಲೆ ಸತ್ತು ಹೋಯ್ತು....ವಾಪಸ್ಸು ಮನೆಗೆ ಬರುವಾಗ ನನ್ನ ಮೌನ ನೋಡಿ "ಅವರಿಬ್ಬರದು love marriage " ಅಂದ್ರು ಗೋವಿಂದಾಚಾರ್ಯ....ನಾನು ಅವರ ಮುಖ ನೋಡಿ ಸುಮ್ಮನಾದೆ... ಅವರ ಮಾತು ಮುಂದುವರೆಯಿತು...ಸಂಜಯ ಜೊತೆನೆ ಕೆಲಸ ಮಾಡ್ತಾಇದ್ದರು...ಅಪ್ಪ ಅಮ್ಮ ಏನು ಹೇಳಿದರು ಕೇಳದೆ ಮದುವೆ ಆದ್ರು...ಒಂದೇ ಜಾತಿ ಆದ್ದರಿಂದ ಬೇರೆ ಪ್ರಾಬ್ಲೆಮ್ ಬರಲಿಲ್ಲಾ ಅಂದ್ರು !!!!????...ನಾವು ಬರೋ ಮುಂಚೆ ಅವರು ಹೇಳಿದ ಮಾತು.."ನನಗೆ ೨ ಹೆಣ್ಣು ಮಕ್ಕಳು...ಒಂದಕ್ಕೆ ೩ ವರ್ಷ,ಇನ್ನೊಂದಕ್ಕೆ ೩೦ ವರ್ಷ " ಅಂತಾ ನಕ್ಕರು...ಅವರ ನಗುವಿನಲ್ಲಿ ನನಗೆ ಏನು ನೋವು,ದುಖ: ಕಾಣಲಿಲ್ಲ.... ಅವಳ ಊನ ನೋಡಿ ನಾನು ಮದುವೆ ಆಗಲಿಲ್ಲಾ... ಹಾಗಿದ್ದರೂ ನಾನು ಯಾರಿಗಿಂತಲೂ ಕಡಿಮೆ ಅಲ್ಲಾ ಅನ್ನೋ ಧೈರ್ಯ ನೋಡಿ ಪ್ರೀತಿ ಮಾಡಿದೆ ಅಂತಾ ಹೆಮ್ಮೆಯಿಂದಾ ಹೇಳೋವಾಗ ಅವರ ಬಗ್ಗೆ ಗೌರವ ಹೆಚ್ಚಾಯಿತು.... ಪ್ರೀತಿ ಅಂದ್ರೆ ಇದೇನಾ??

ನೋಡಲು ಚೆನ್ನಾಗಿ ಇರೋರ್ನಾ ಪ್ರೀತಿ ಮಾಡಿದ್ರೆ... ಹೇಗೆ?? ಎಲ್ಲಾರಿಗೂ ಮನಸು,ಆಸೆ ಇರುತ್ತೆ ಅಲ್ವಾ?? ಆ ಪ್ರೀತಿನಾ ಅರ್ಥ ಮಾಡಕೊಳ್ಳಲಾಗದಷ್ಟು ಮುರ್ಖರಾ?? ಪ್ರೀತಿ ಬಗ್ಗೆ ಹೇಳ್ತಾರೆ...ಆದ್ರೆ ನನ್ನ ಹೆಂಡತಿ ಮಾತ್ರ ರಂಬೆ ತರಾ ಇರಬೇಕು,ನನ್ನ ಗಂಡ ಮನ್ಮಥ ತರಾ ಇರಬೇಕು ಅಂತಾ ಆಸೆ ಪಡ್ತಾರೆ... ಆಮೇಲೆ ತಾವು ರಂಬೆ/ಮನ್ಮಥ ಅಲ್ಲಾ ಅಂತಾ ಗೊತ್ತಾದ ಮೇಲೆ ಸುಮ್ಮನಾಗ್ತಾರೆ... ಇಷ್ಟೆಲ್ಲಾ ಬರೆಯೋ ಹೊತ್ತಿಗೆ ಗೆಳತಿ ಫೊನ್ ಬಂತು ...ಮತ್ತೆ ಅದೇ ರಾಗ ...ಅದೇ ಹಾಡು.... ಪ್ರೀತಿ ಅಂದ್ರೆ ಇದೇನಾ???

Friday, October 24, 2008

ಪ್ರೀತಿ




ಕಾದಿರುವೆ ಅವನ ದಾರಿಯ ...
ಅವ ಹೋದ ಹೇಳಿ ಹೇಳದ ಹಾಗೆ...

ಪ್ರೀತಿಯ ಮಾತುಗಳ ಆಡಿ,
ಮನಸಿನಲಿ ಏನೋ ಮೋಡಿ ಮಾಡಿ.
ಒಲವಿನ ಹೂ ಮುಡಿಸಿ
ಅವ ಹೋದ ಹೇಳಿ ಹೇಳದ ಹಾಗೆ...

ಮನಸಿನ ರೆಕ್ಕೆ ಬಿಚ್ಚಿ ನಾ ಹಾರಾಡಿದೆ
ನಿನ್ನ ಬೆಚ್ಚನೆ ಎದೆಗೂಡಲಿ ಮಲಗಿದೆ.
ಮತ್ತೆ ಬರುವೆನೆಂದು ಹೇಳಿ
ಅವ ಹೋದ ಹೇಳಿಹೇಳದ ಹಾಗೆ...

ನೀ ಬರುವೆನೆಂದು ಕಾದಿರುವೆನು...
ಒಂದು ಕಣ್ಣ ಹನಿ ಕೂಡ ಹಾಕದೆ...
ಆದರೂ ನೀ ಬರದೆ ಹೋದೆಯಲ್ಲಾ...
ಕಣ್ಣೀರ ಹನಿ ಬತ್ತಿ,ಮನ ಬರಡಾಯಿತಲ್ಲಾ...

Thursday, September 4, 2008

ಅವಳ ಕಣ್ಣಹನಿ.......


ಒಂದು ಮಳೆ ನಿಂತ ಸಂಜೆಯ ಸಮಯದಲಿ....
ಅವಳು ಎದುರಿಗೆ ಬಂದಳು,ಅನಿರೀಕ್ಷಿತವಾಗಿ
ಆಗ ತಾನೆ ಸುರಿದ ಮಳೆಹನಿಯಂತೆ....


ಅವಳ ಎಲ್ಲಿಲ್ಲದ ಉತ್ಸಾಹ,ಹರಿದು ಬಂತು...
ಕಣ್ಣಲ್ಲಿ ತುಂತುರು ಹನಿಗಳ ಹಾಗೆ....
ಅದ ನೋಡಿ,ಎನ್ನ ಮನದಲಿ ಸಿಡಿಲು ಬಡಿಯಿತು...

ಮೂಕಪ್ರೇಕ್ಷಕನಾಗಿ ಅವಳನ್ನೆ ನೋಡುತ
ಅವಳ ಆ ನಗು ಮುಖ ಕಾಣದೆ ಸೋರಗಿದೆನು..
ಎನೆಂದು ಕೇಳಲು ಮನಸ್ಸಾದರೂ,ಅಲ್ಲೆ ಸುಮ್ಮನಾದೆನು..

ಹೊರಟೆನು ಒಂದು ಮಾತನಾಡದೆ ಮುಂದೆ...
ಅವಳ ಆ ಸ್ಪರ್ಶ ಕಳೆದು ಹೋದ ಆಸೆಯ ಚಿಗುರೊಡೆಸಿತು...
ಆ ಗಳಿಗೆಯು ಈ ಬಾಳೆ ಸುಖವೆನಿಸಿತು...

ಮುಂದೆ ನಡೆದಳು ನನ್ನ ನೋಡಿಯು ನೋಡದೆ...
ಹಿಂತಿರುಗಿ ಅವಳ ನೋಡಲು ಧೈರ್ಯವಿಲ್ಲ.
ಏಕೆಂದರೆ,ಆ ಕಣ್ಣ ಹನಿಗಳಿಗೆ ಉತ್ತರವಿಲ್ಲ....

Friday, May 30, 2008

ಸೋಲುತಿಹದು ಮನ


ನಾ ಕಂಡ ಮೊಗದಲಿ ಹೊರಟಿತ್ತು ನಗುವಿನ ನೌಕೆ
ಅವಳ ಆ ತುಟಿಗಳ ನಡುವೆ ಮೂಡಿತು ರೇಖೆ..

ಹರಿಯುವ ಆ ನೀರಿನ ಹಾಗೆ ನಿನ್ನಯ ದನಿ
ಕೇಳುತ ನಾ ನಿಂತೆ,ಕಳೆಯಿತು ಅಲ್ಲೆ ನನ್ನ ಮನ.
ಕಿಲ ಕಿಲ ನಗುವನು ಕಲಿತ ಆ ಕೋಗಿಲೆ
ಹಚ್ಚೆದ್ದು ಹಾಡುತಿರುವುದು ಆಗಲೇ.

ನಿನ್ನ ನಗುವಿಗೆ ನಲಿಯಿತು ನೈದಿಲೆ
ಗರಿಬಿಚ್ಚಿ ಕುಣಿಯುತಿಹದು ನವಿಲೆ
ಸಾಲು ಮುತ್ತು ನಿನ್ನ ನಗುವಿನ ಹಿಂದೆ
ನನಗೆ ನೀನೆ ಇನ್ನು ಹಿಂದೆ ಮುಂದೆ .

ಸಾಕಾಗಿದೆ ಈ ನಿನ್ನ ವರ್ಣನೆ.
ಸೋಲುತಿಹದು ಮನ ನಿನ್ನ ಕಣ್ಣಗಳಲೆ
ನಾ ಬರುವೆ ನಿನ್ನ ಮನದಂಗಳಕೆ
ಹಚ್ಚಬಾರದೆ ನೀ ಪ್ರೇಮದ ಅಗ್ಗಿಷ್ಟಿಕೆ..

Thursday, May 29, 2008

ಥೂ ... ಅದು ಒಂದ್ ಜನ್ಮನಾ??


ಸಾರಾಯಿ ಅಂಗ್ಡಿಗೆ ಓಗಿ ಸಾಲದ್ಯಾಗೆ ಕಾಡಿ ಬೇಡಿ ನಾ;
ಮುಚ್ಚಳ ಬಿಚ್ಚಿ, ಗಿಲಾಸ್ನ್ಯಾಗೆ ಹುಯ್ದ್ ಕೊಟ್ಟಿದ್ದು ಮಂಜಾನೆನಾ...
ಬುಂಡೆನ್ಯೆತ್ತಿ ಕುಡೆಯಕೆ ಹತ್ತಿದೆ ಒಂದ್ ಒಂದ್ ಗುಟ್ಕ್ ನಾ...
ಕುಡ್ಬುಟ್ ತೂರಾಡ್ಲಿಲ್ಲಾ ಅಂದ್ರೆ ಥೂ ... ಅದು ಒಂದು ಜನ್ಮನಾ??

ಕಾರದ್ ಚಟ್ನಿ, ಉಪ್ಪಿನ್ಕಾಯಿ ನ್ಯಾಲಿಗೆ ಹಚ್ಚಿ ಇನ್ನಾ ಬೇಕಂದೆ ನಾ..
ಏಟೊ ವರ್ಸದ್ ಗೆಳಯನಂಗೆ ಕೆಂಪನ್ ಮಾತ್ಗೆ ಕರ್ದೆ ನಾ...
ಗಿಲಾಸ್ ಕಾಲಿ ಯಾಗಿದ್ ನೋಡಿ, ಇನ್ನೊಂದ್ ತಾರ್ಲ್ ಅಂದೆ ನಾ...
ಕುಡ್ಬುಟ್ ತೂರಾಡ್ಲಿಲ್ಲಾ ಅಂದ್ರೆ ಥೂ ... ಅದು ಒಂದ್ ಜನ್ಮನಾ??

ಖಾರ ನೆತ್ತಿಗೆ ಹತ್ತಿ ಕೆಮ್ಮಿ ,ಹೆಂಡ್ತಿ ನೆನ್ಸೋತಾ ಅವಳೆ ಅಂದೆ ನಾ..
ಅರ್ದ್ ತುಂಬಿದ್ ಆರ್ನೆ ಗಿಲಾಸ್ ಇಡ್ಕೊಂಡ್ ಮನೆ ಕಡೆ ನಡಿದೆ ನಾ...
ರಸ್ತೆ ಮಾತ್ರಾ ತೂರಾಡ್ತಿತ್ತು, ನೇರ್ವಾಗೆ ನಡ್ಕೊಂಡು ಹೊರಟೆ ನಾ ...
ನೋಡ್ಲಾ ರೋಡ್ ನ್ಯಾಗೆ ಹಾಸಗೆ ಹಾಕೋರೆ ಅಂತಾ ಅಲ್ಲೆ ಮಲ್ಗ್ ಬಿಟ್ಟೆ ನಾ

ಕುಡ್ಬುಟ್ ತೂರಾಡ್ಲಿಲ್ಲಾ ಅಂದ್ರೆ ಥೂ ... ಅದು ಒಂದ್ ಜನ್ಮನಾ??
ಕುಡ್ಬುಟ್ ತೂರಾಡ್ಲಿಲ್ಲಾ ಅಂದ್ರೆ ಥೂ ... ಅದು ಒಂದ್ ಜನ್ಮನಾ??

Wednesday, May 28, 2008

ಬೆಂಕಿಯಂತೆ ಉರಿಯುತ್ತಿದೆ ನನ್ನ ಹೃದಯ ....


ಮೆರಿಕಾಕ್ಕೆ ಹೋದ ಮೊಟ್ಟಮೊದಲ ಝೆನ್ ಗುರು ಸೋಯೆನ್ ಶಾಕು "ನನ್ನ ಹೃದಯ ಬೆಂಕಿಯಂತೆ ಉರಿಯುತ್ತಿದೆ, ನನ್ನ ಕಣ್ಣು ಮಾತ್ರ ಬೂದಿಯ ಹಾಗೆ ತಣ್ಣಗಿದೆ" ಎಂದ. ಅವನು ಕೆಲವು ನಿಯಮಗಳನ್ನಿಟ್ಟುಕೊಂಡು ಹಾಗೆಯೇ ಬದುಕಿದ್ದ. ಆ ನಿಯಮಗಳು ಇವು: ಬೆಳಗ್ಗೆ ಎದ್ದು ಬಟ್ಟೆ ಹಾಕಿಕೊಂಡು ಸಿದ್ಧವಾಗುವ ಮೊದಲು ಧೂಪವನ್ನು ಹಾಕಿ ಧ್ಯಾನಮಾಡು.
  • ನಿಗದಿಯಾದ ಸಮಯದಲ್ಲಿ ಮಲಗು. ನಿಗದಿಯಾದ ಹೊತ್ತಿನಲ್ಲಿ ಊಟಮಾಡು. ಹೊಟ್ಟೆ ತುಂಬಿ ತೃಪ್ತಿಯಾಗುವಷ್ಟು ತಿನ್ನಬೇಡ.
  • ಯಾರಾದರೂ ಅತಿಥಿ ಬಂದರೆ ನೀನೊಬ್ಬನೇ ಇರುವಾಗ ಯಾವ ಧೋರಣೆ ಇರುತ್ತದೆಯೋ ಅದೇ ಧೋರಣೆಯಲ್ಲಿ ಸ್ವಾಗತಿಸು. ಒಬ್ಬನೇ ಇರುವಾಗ ಅತಿಥಿ ಇದ್ದರೆ ಹೇಗೆ ಇರುತ್ತೀಯೋ ಹಾಗೆಯೇ ಇರು.
  • ಆಡುವ ಮಾತಿನ ಮೇಲೆ ನಿಗಾ ಇರಲಿ. ಏನು ಆಡುತ್ತೀಯೋ ಹಾಗೆಯೇ ನಡೆದುಕೋ.
  • ಅವಕಾಶ ಸಿಕ್ಕಿದಾಗ ಅದನ್ನು ಕಳೆದುಕೊಳ್ಳಬೇಡ. ಆದರೆ ಏನೇ ಮಾಡುವ ಮೊದಲು ಎರಡು ಬಾರಿ ಆಲೋಚಿಸು.
  • ಆಗಿ ಹೋದದ್ದರ ಬಗ್ಗೆ ಚಿಂತಿಸಬೇಡ. ಭವಿಷ್ಯವನ್ನು ನೋಡು.
  • ನಾಯಕನ ಹಾಗೆ ನಿರ್ಭಯವಾಗಿರು, ಮಕ್ಕಳ ಹಾಗೆ ಮನತುಂಬಿ ಪ್ರೀತಿಸು.
  • ಮಲಗುವಾಗ ಇದೇ ಕೊನೆಯ ನಿದ್ರೆ ಎಂಬಂತೆ ಮಲಗು. ಎದ್ದಾಗ ಹಳೆಯ ಚಪ್ಪಲಿ ಎಸೆದುಬಿಡುವ ಹಾಗೆ ತಟ್ಟನೆ ಹಾಸಿಗೆ ಬಿಟ್ಟೇಳು.

Monday, May 26, 2008

ನಾನ್ಯಾರು?? (ಅಹಂ)





















ಈ ಜೀವನದ ಆಟದಲಿ
ಸೋಲಿಲ್ಲದ ಸರದಾರ ನಾನು...
ಭಯವ ಬೆನ್ನಟ್ಟುವ
ಶರವೇಗದ ಬೆಂಕಿ ಉಂಡೆ ನಾನು...

ಈ ನಾನು ಎಂಬ ಮಾಯೆಯ
ಬೆನ್ನನೇರಿದ ಹುಚ್ಚು ಕುದುರೆ ನಾನು...
ಈ ಜಗವ ಗೆಲ್ಲುವೆಂಬ ಹಠದಿ
ಗುರಿ ಇಲ್ಲದೆ ಬಿಟ್ಟ ಬಾಣ ನಾನು...

ಛಲವ ಹಿಡಿದರೆ
ಬಿಡದೆ ಸಾಧಿಸುವ ಚಾಣುಕ್ಯ ನಾನು...
ಬಲದಲಿ ಎದುರಾದರೆ
ಆ ಭೀಮನನ್ನೆ ಸೋಲಿಸುವ ಶಕ್ತಿ ನಾನು...

ಜಯದಲಿ ಬೀರುವ
ಅಟ್ಟಹಾಸದ ನಗೆಯ ಅಹಂ ನಾನು...
ಈ ಜಗವು ನಡೆಸುತ್ತಿರುವ
ಕಾಂಚಾಣ ಕೇಳಿತು ಇಂದು ನನ್ನ ......... ನೀನ್ಯಾರು ??

ನಾನ್ಯಾರು??






















ಪ್ರೀತಿಯೆಂಬ ಶರಧಿಯಲಿ
ಸ್ವಾತಿ ಮಳೆಗಾಗಿ ಕಾದಿರುವ ಚಿಪ್ಪು ನಾನು...
ಮರಭೂಮಿಯ ಬಿಸಿಧಗೆಯಲಿ
ಜೀವ ಉಳಿಸುವ ನೀರಿನ ಚಿಲುಮೆ ನಾನು...

ಸ್ನೇಹವೆಂಬ ಆಗಸದ
ಸದಾ ಹೊಳೆಯುವ ಚುಕ್ಕಿ ನಾನು...
ಬರಡು ಬದುಕಿಗೆ
ಅಮೄತ ಸುರಿಸುವ ಆ ವರ್ಷಧಾರೆ ನಾನು...

ಮಮತೆಯ ಬಲೆಯಲಿ
ಸಿಲುಕಿದ ತಾಯಿ ಪ್ರೀತಿ ನಾನು...
ಸಿಡಿಲ ಆರ್ಭಟಕ್ಕೆ
ಪ್ರತಿರೋಧ ತರುವ ಕವಚ ನಾನು....

ಇಷ್ಟೆಲ್ಲ ಇದ್ದರೂ
ಬೆಳಗಿನ ಕಿರಣ ಕೇಳುವ ಪ್ರಶ್ನೆ ನೀನ್ಯಾರು !!?? ...

ಪ್ರೀತಿಯ ನಗು

















ಆದಿನ ಕಾಣದೆ ಹೋದೆ ಈ ಪ್ರೀತಿಯ ,ಬೆಳದಿಂಗಳ ರಾತ್ರಿಯಲಿ
ಆದರೂ ಹುಡುಕಿದೆ ನಾನಿನ್ನ, ಮನದಂಗಳದಲಿ.

ಎಂದಾದರೂ ನಿ ಬಂದು ನನ್ನ ಸೇರುವೆ ಎಂಬ ಆಸೆಯಲಿ
ಕಾದಿದ್ದೆ ನಾ ರಾತ್ರಿ ಹಗಲಲ್ಲಿ,
ಆದರೆ ನೀ ಬರಲಿಲ್ಲ, ಆಸೆ ಕೈಗೂಡಲಿಲ್ಲ,
ಪ್ರೀತಿಯಲಿ ನಾ ತೇಲಲಿಲ್ಲ, ದು:ಖದಲಿ ನಾ ಅತ್ತೇನಲ್ಲ.

ಮರುದಿನ ಆ ಬೆಳಗಿನ ಹೊಸ ಕಿರಣ ಬಂದು,
ನನ್ನ ಮನದ ಕದವ ತಟ್ಟಿದಾಗ,
ಹೊಸ ಆಸೆಯು ಚಿಗುರಿ,ಬಾಗಿಲ ಬಳಿ ನಿಂತಾಗ ನೀ ಬರಲಿಲ್ಲ,
ಮನವೆಂಬ ಹೂ,ಭ್ರಮರಕ್ಕಾಗಿ ದು:ಖಿಸಿತ್ತಲ್ಲ.

ಹೂ ಮುದುಡುವ ಸಮಯದಲಿ ,ಬಂದೆ ನೀ ಅಲ್ಲಿ
ಆಸೆಯೂ ಚಿಗುರಿತು ,ಮತ್ತೆ ಹೂ ಅರಳಿತು.
ನೀ ಪ್ರೀತಿಯ ನಗೂ ಚೆಲ್ಲಿದಾಗ , ಮನವೂ ಹೇಳಿತಾಗ
ಈ ಒಂದು ನಗುವಿಗಲ್ಲವೇ, ನೀ ಹಗಲಿರುಳು ಕಾದ್ದಿದ್ದೆಯಲ್ಲ.

Thursday, April 10, 2008

ಕಾಡಿದೆ ಅವಳದೆ ನೆನಪು

ನೆನಪು ಕಾಡಿದೆ ಅವಳದೇ ಇಂದು

ಎಂದು ಇಲ್ಲದ ಪ್ರೀತಿ ಉಕ್ಕಿದೆ ಇಂದು

ಆ ಹವಳದ ತುಟಿಗಳಒಳಗೆ ಆ ಮುತ್ತಿನ ಸಾಲುಗಳು

ಆ ಸಂಪಿಗೆಯಂತ ನಾಸಿಕದಲ್ಲಿನ ಬಂಗಾರದ ಮೂಗುತಿ

ಆಗಸವೇ ಅಸೂಯೇ ಪಡುವಂತ ಆ ನೀಲಿ ಕಣ್ಣುಗಳು

ಎಂತವರಿಗೂ ಮೋಹ ಹುಟ್ಟಿಸುವ ಆ ಕಾಮನ ಬಿಲ್ಲಿನ ಹುಬ್ಬುಗಳು…

ವರ್ಣಿಸಿದರೂ ಮುಗಿಯದ ಅವಳ ದೇಹದ ಮೈಮಾಟ

ಬ್ರಹ್ಮ,ಕಾಮನ ಜೊತೆಗೂಡಿ ಆಡಿದ ಆಟ

ಆ ತುಂಬು ದೇಹದ ಕೆಳಗೆ ಬಳ್ಳಿಯಂತಹ ನಡು

ಅಪ್ಸರೆಯರಿಗಂತೂ,ನಡುಕ ಹುಟ್ಟಿಸದೆ ಬಿಡದು.

ನಡೆದು ಬರುತ್ತೀರೆ ಅವಳು ರಂಬೆ,ಉರ್ವಶಿಯಂತೆ

ಬಂದಳು ಎನ್ನ ಅಂಗಳಕೆ ವರ್ಷಧಾರೆಯಂತೆ

ಅವಳು ತೋರಿದಪ್ರೀತಿಯಲಿ ನಾ ನೆನೆದು ಅಂದು

ಮಾಯಾಜಿಂಕೆಯಾದಳು ಮತ್ತೆ ಸಿಗುವೆನೆಂದು.

ನೆನಪು ಕಾಡಿದೆ ಅವಳದೇ ಇಂದು

ಎಂದು ಇಲ್ಲದ ಪ್ರೀತಿ ಉಕ್ಕಿದೆ ಇಂದು