
ಕನಸಿನ ಆಕಾಶದಿ ಹಕ್ಕಿಯಾಗಿದ್ದೆ ನಾನು...
ಆಸೆಯ ರೆಕ್ಕೆ ಕಟ್ಟಿದವಲ್ಲವೇ ನೀನು..
ಈಗೇಕೆ ನನ್ನ ಪಂಜರದೊಳು ನೋಡ ಬಯಸುತಿರುವೆ??
ಹಾದಿ ಬದಿಯಲಿ ಬೆಳೆಯುವ ಹೂವಾಗಿದ್ದೆ...
ನಿನ್ನ ಅಂತರಂಗದ ತೋಟದ ಹೂ ಮಾಡಿದೆ ಎನ್ನ...
ಇಂದು ದೇವರ ಪಾದದಡಿ ನನ್ನ ತಳ್ಳುತಿರುವೇಕೆ??
ಜಲದಿ ನಲಿದಾಡುವ ಜೀವ ನಾನು..
ನಿನ್ನ ಪ್ರೀತಿಯ ಕಡಲ ತೋರಿದವ ನೀನು....
ಖುಷಿಯಾಗಿರು ಹೋಗು ಎಂದು ಕೂಪವ ತೋರುತಿರುವೇಕೆ??
ಸೌಂದರ್ಯವರಿಯದ ಹುಳುವಾಗಿದ್ದೆ ನಾನು
ಕನಸಿನಲಿ ಹಾರುವ ಬಣ್ಣದ ಚಿಟ್ಟೆ ಮಾಡಿದೆ ನೀನು..
ಬಣ್ಣವಿಲ್ಲದ ಭಾವಕೆ ನನ್ನ ಕೊಲ್ಲುತಿರುವೇಕೆ??