
ಈ ಕ್ಷಣ ನಿನ್ನ ನೆನಪು ಕಣ್ಣಹನಿಯಾಗಿ
ಎನ್ನ ಮನದಾಳದ ಮಾತುಗಳ ಕಟ್ಟಿಹಾಕಿದೆ...
ಹೇಳಬೇಕೆಂತ್ತಿದ್ದ ನೂರಾರು ಆಸೆಗಳು
ಹೃದಯ ಸೆರೆಮನೆಯ ಕದವ ತೆರೆಯದಾಗಿದೆ...
ಮಾತಿನಿಂದಲೆ ಮನವ ಗೆದ್ದವ ನೀ
ಈ ಮೌನ ಮನದ ಮಾತು ಅರ್ಥವಾಗಲಿಲ್ಲವೆ??....
ಮುದನೀಡುತ್ತಿದ್ದ ನಿನ್ನ ನಿರ್ಮಲ ನಗೆಯು
ಇಂದೇಕೊ ನನ್ನ ನೋಡಿ ಅಪಹಾಸ್ಯ ಮಾಡಿದಂತಿದೆ...
ಸರಸವಾಡುವ ನಿನ್ನ ತುಟಿಗಳಿಗೆ
ನನ್ನ ನೋವಿನ ಬಿಸಿಯುಸಿರು ಗೊತ್ತಾಗಲಿಲ್ಲವೆ??....
ನಿಂತಿರುವೆ ಮುಂದೆ ದಾರಿ ಕಾಣದೆ
ನಿನ್ನ ಹಿಂಬಾಲಿಸುತ್ತಿದ್ದ ಆ ಹೂದೋಟದ ದಾರಿಯಲೆ
ನೀ ನನ್ನ ನೋಡಿ ನಗುತ್ತಾ ಹೋದಾಗ...
ನಿನ್ನ ಅಗಲಿಕೆ ಮೌನವಾಗಿ,ಕಣ್ಣಲ್ಲೆ ಎಲ್ಲವನು ಹೇಳುತಿದೆ.....
ಈ ಕ್ಷಣ ನಿನ್ನ ನೆನಪು ಕಣ್ಣಹನಿಯಾಗಿ
ಎನ್ನ ಮನದಾಳದ ಮಾತುಗಳ ಕಟ್ಟಿಹಾಕಿದೆ...