Friday, May 30, 2008

ಸೋಲುತಿಹದು ಮನ


ನಾ ಕಂಡ ಮೊಗದಲಿ ಹೊರಟಿತ್ತು ನಗುವಿನ ನೌಕೆ
ಅವಳ ಆ ತುಟಿಗಳ ನಡುವೆ ಮೂಡಿತು ರೇಖೆ..

ಹರಿಯುವ ಆ ನೀರಿನ ಹಾಗೆ ನಿನ್ನಯ ದನಿ
ಕೇಳುತ ನಾ ನಿಂತೆ,ಕಳೆಯಿತು ಅಲ್ಲೆ ನನ್ನ ಮನ.
ಕಿಲ ಕಿಲ ನಗುವನು ಕಲಿತ ಆ ಕೋಗಿಲೆ
ಹಚ್ಚೆದ್ದು ಹಾಡುತಿರುವುದು ಆಗಲೇ.

ನಿನ್ನ ನಗುವಿಗೆ ನಲಿಯಿತು ನೈದಿಲೆ
ಗರಿಬಿಚ್ಚಿ ಕುಣಿಯುತಿಹದು ನವಿಲೆ
ಸಾಲು ಮುತ್ತು ನಿನ್ನ ನಗುವಿನ ಹಿಂದೆ
ನನಗೆ ನೀನೆ ಇನ್ನು ಹಿಂದೆ ಮುಂದೆ .

ಸಾಕಾಗಿದೆ ಈ ನಿನ್ನ ವರ್ಣನೆ.
ಸೋಲುತಿಹದು ಮನ ನಿನ್ನ ಕಣ್ಣಗಳಲೆ
ನಾ ಬರುವೆ ನಿನ್ನ ಮನದಂಗಳಕೆ
ಹಚ್ಚಬಾರದೆ ನೀ ಪ್ರೇಮದ ಅಗ್ಗಿಷ್ಟಿಕೆ..

Thursday, May 29, 2008

ಥೂ ... ಅದು ಒಂದ್ ಜನ್ಮನಾ??


ಸಾರಾಯಿ ಅಂಗ್ಡಿಗೆ ಓಗಿ ಸಾಲದ್ಯಾಗೆ ಕಾಡಿ ಬೇಡಿ ನಾ;
ಮುಚ್ಚಳ ಬಿಚ್ಚಿ, ಗಿಲಾಸ್ನ್ಯಾಗೆ ಹುಯ್ದ್ ಕೊಟ್ಟಿದ್ದು ಮಂಜಾನೆನಾ...
ಬುಂಡೆನ್ಯೆತ್ತಿ ಕುಡೆಯಕೆ ಹತ್ತಿದೆ ಒಂದ್ ಒಂದ್ ಗುಟ್ಕ್ ನಾ...
ಕುಡ್ಬುಟ್ ತೂರಾಡ್ಲಿಲ್ಲಾ ಅಂದ್ರೆ ಥೂ ... ಅದು ಒಂದು ಜನ್ಮನಾ??

ಕಾರದ್ ಚಟ್ನಿ, ಉಪ್ಪಿನ್ಕಾಯಿ ನ್ಯಾಲಿಗೆ ಹಚ್ಚಿ ಇನ್ನಾ ಬೇಕಂದೆ ನಾ..
ಏಟೊ ವರ್ಸದ್ ಗೆಳಯನಂಗೆ ಕೆಂಪನ್ ಮಾತ್ಗೆ ಕರ್ದೆ ನಾ...
ಗಿಲಾಸ್ ಕಾಲಿ ಯಾಗಿದ್ ನೋಡಿ, ಇನ್ನೊಂದ್ ತಾರ್ಲ್ ಅಂದೆ ನಾ...
ಕುಡ್ಬುಟ್ ತೂರಾಡ್ಲಿಲ್ಲಾ ಅಂದ್ರೆ ಥೂ ... ಅದು ಒಂದ್ ಜನ್ಮನಾ??

ಖಾರ ನೆತ್ತಿಗೆ ಹತ್ತಿ ಕೆಮ್ಮಿ ,ಹೆಂಡ್ತಿ ನೆನ್ಸೋತಾ ಅವಳೆ ಅಂದೆ ನಾ..
ಅರ್ದ್ ತುಂಬಿದ್ ಆರ್ನೆ ಗಿಲಾಸ್ ಇಡ್ಕೊಂಡ್ ಮನೆ ಕಡೆ ನಡಿದೆ ನಾ...
ರಸ್ತೆ ಮಾತ್ರಾ ತೂರಾಡ್ತಿತ್ತು, ನೇರ್ವಾಗೆ ನಡ್ಕೊಂಡು ಹೊರಟೆ ನಾ ...
ನೋಡ್ಲಾ ರೋಡ್ ನ್ಯಾಗೆ ಹಾಸಗೆ ಹಾಕೋರೆ ಅಂತಾ ಅಲ್ಲೆ ಮಲ್ಗ್ ಬಿಟ್ಟೆ ನಾ

ಕುಡ್ಬುಟ್ ತೂರಾಡ್ಲಿಲ್ಲಾ ಅಂದ್ರೆ ಥೂ ... ಅದು ಒಂದ್ ಜನ್ಮನಾ??
ಕುಡ್ಬುಟ್ ತೂರಾಡ್ಲಿಲ್ಲಾ ಅಂದ್ರೆ ಥೂ ... ಅದು ಒಂದ್ ಜನ್ಮನಾ??

Wednesday, May 28, 2008

ಬೆಂಕಿಯಂತೆ ಉರಿಯುತ್ತಿದೆ ನನ್ನ ಹೃದಯ ....


ಮೆರಿಕಾಕ್ಕೆ ಹೋದ ಮೊಟ್ಟಮೊದಲ ಝೆನ್ ಗುರು ಸೋಯೆನ್ ಶಾಕು "ನನ್ನ ಹೃದಯ ಬೆಂಕಿಯಂತೆ ಉರಿಯುತ್ತಿದೆ, ನನ್ನ ಕಣ್ಣು ಮಾತ್ರ ಬೂದಿಯ ಹಾಗೆ ತಣ್ಣಗಿದೆ" ಎಂದ. ಅವನು ಕೆಲವು ನಿಯಮಗಳನ್ನಿಟ್ಟುಕೊಂಡು ಹಾಗೆಯೇ ಬದುಕಿದ್ದ. ಆ ನಿಯಮಗಳು ಇವು: ಬೆಳಗ್ಗೆ ಎದ್ದು ಬಟ್ಟೆ ಹಾಕಿಕೊಂಡು ಸಿದ್ಧವಾಗುವ ಮೊದಲು ಧೂಪವನ್ನು ಹಾಕಿ ಧ್ಯಾನಮಾಡು.
  • ನಿಗದಿಯಾದ ಸಮಯದಲ್ಲಿ ಮಲಗು. ನಿಗದಿಯಾದ ಹೊತ್ತಿನಲ್ಲಿ ಊಟಮಾಡು. ಹೊಟ್ಟೆ ತುಂಬಿ ತೃಪ್ತಿಯಾಗುವಷ್ಟು ತಿನ್ನಬೇಡ.
  • ಯಾರಾದರೂ ಅತಿಥಿ ಬಂದರೆ ನೀನೊಬ್ಬನೇ ಇರುವಾಗ ಯಾವ ಧೋರಣೆ ಇರುತ್ತದೆಯೋ ಅದೇ ಧೋರಣೆಯಲ್ಲಿ ಸ್ವಾಗತಿಸು. ಒಬ್ಬನೇ ಇರುವಾಗ ಅತಿಥಿ ಇದ್ದರೆ ಹೇಗೆ ಇರುತ್ತೀಯೋ ಹಾಗೆಯೇ ಇರು.
  • ಆಡುವ ಮಾತಿನ ಮೇಲೆ ನಿಗಾ ಇರಲಿ. ಏನು ಆಡುತ್ತೀಯೋ ಹಾಗೆಯೇ ನಡೆದುಕೋ.
  • ಅವಕಾಶ ಸಿಕ್ಕಿದಾಗ ಅದನ್ನು ಕಳೆದುಕೊಳ್ಳಬೇಡ. ಆದರೆ ಏನೇ ಮಾಡುವ ಮೊದಲು ಎರಡು ಬಾರಿ ಆಲೋಚಿಸು.
  • ಆಗಿ ಹೋದದ್ದರ ಬಗ್ಗೆ ಚಿಂತಿಸಬೇಡ. ಭವಿಷ್ಯವನ್ನು ನೋಡು.
  • ನಾಯಕನ ಹಾಗೆ ನಿರ್ಭಯವಾಗಿರು, ಮಕ್ಕಳ ಹಾಗೆ ಮನತುಂಬಿ ಪ್ರೀತಿಸು.
  • ಮಲಗುವಾಗ ಇದೇ ಕೊನೆಯ ನಿದ್ರೆ ಎಂಬಂತೆ ಮಲಗು. ಎದ್ದಾಗ ಹಳೆಯ ಚಪ್ಪಲಿ ಎಸೆದುಬಿಡುವ ಹಾಗೆ ತಟ್ಟನೆ ಹಾಸಿಗೆ ಬಿಟ್ಟೇಳು.

Monday, May 26, 2008

ನಾನ್ಯಾರು?? (ಅಹಂ)





















ಈ ಜೀವನದ ಆಟದಲಿ
ಸೋಲಿಲ್ಲದ ಸರದಾರ ನಾನು...
ಭಯವ ಬೆನ್ನಟ್ಟುವ
ಶರವೇಗದ ಬೆಂಕಿ ಉಂಡೆ ನಾನು...

ಈ ನಾನು ಎಂಬ ಮಾಯೆಯ
ಬೆನ್ನನೇರಿದ ಹುಚ್ಚು ಕುದುರೆ ನಾನು...
ಈ ಜಗವ ಗೆಲ್ಲುವೆಂಬ ಹಠದಿ
ಗುರಿ ಇಲ್ಲದೆ ಬಿಟ್ಟ ಬಾಣ ನಾನು...

ಛಲವ ಹಿಡಿದರೆ
ಬಿಡದೆ ಸಾಧಿಸುವ ಚಾಣುಕ್ಯ ನಾನು...
ಬಲದಲಿ ಎದುರಾದರೆ
ಆ ಭೀಮನನ್ನೆ ಸೋಲಿಸುವ ಶಕ್ತಿ ನಾನು...

ಜಯದಲಿ ಬೀರುವ
ಅಟ್ಟಹಾಸದ ನಗೆಯ ಅಹಂ ನಾನು...
ಈ ಜಗವು ನಡೆಸುತ್ತಿರುವ
ಕಾಂಚಾಣ ಕೇಳಿತು ಇಂದು ನನ್ನ ......... ನೀನ್ಯಾರು ??

ನಾನ್ಯಾರು??






















ಪ್ರೀತಿಯೆಂಬ ಶರಧಿಯಲಿ
ಸ್ವಾತಿ ಮಳೆಗಾಗಿ ಕಾದಿರುವ ಚಿಪ್ಪು ನಾನು...
ಮರಭೂಮಿಯ ಬಿಸಿಧಗೆಯಲಿ
ಜೀವ ಉಳಿಸುವ ನೀರಿನ ಚಿಲುಮೆ ನಾನು...

ಸ್ನೇಹವೆಂಬ ಆಗಸದ
ಸದಾ ಹೊಳೆಯುವ ಚುಕ್ಕಿ ನಾನು...
ಬರಡು ಬದುಕಿಗೆ
ಅಮೄತ ಸುರಿಸುವ ಆ ವರ್ಷಧಾರೆ ನಾನು...

ಮಮತೆಯ ಬಲೆಯಲಿ
ಸಿಲುಕಿದ ತಾಯಿ ಪ್ರೀತಿ ನಾನು...
ಸಿಡಿಲ ಆರ್ಭಟಕ್ಕೆ
ಪ್ರತಿರೋಧ ತರುವ ಕವಚ ನಾನು....

ಇಷ್ಟೆಲ್ಲ ಇದ್ದರೂ
ಬೆಳಗಿನ ಕಿರಣ ಕೇಳುವ ಪ್ರಶ್ನೆ ನೀನ್ಯಾರು !!?? ...

ಪ್ರೀತಿಯ ನಗು

















ಆದಿನ ಕಾಣದೆ ಹೋದೆ ಈ ಪ್ರೀತಿಯ ,ಬೆಳದಿಂಗಳ ರಾತ್ರಿಯಲಿ
ಆದರೂ ಹುಡುಕಿದೆ ನಾನಿನ್ನ, ಮನದಂಗಳದಲಿ.

ಎಂದಾದರೂ ನಿ ಬಂದು ನನ್ನ ಸೇರುವೆ ಎಂಬ ಆಸೆಯಲಿ
ಕಾದಿದ್ದೆ ನಾ ರಾತ್ರಿ ಹಗಲಲ್ಲಿ,
ಆದರೆ ನೀ ಬರಲಿಲ್ಲ, ಆಸೆ ಕೈಗೂಡಲಿಲ್ಲ,
ಪ್ರೀತಿಯಲಿ ನಾ ತೇಲಲಿಲ್ಲ, ದು:ಖದಲಿ ನಾ ಅತ್ತೇನಲ್ಲ.

ಮರುದಿನ ಆ ಬೆಳಗಿನ ಹೊಸ ಕಿರಣ ಬಂದು,
ನನ್ನ ಮನದ ಕದವ ತಟ್ಟಿದಾಗ,
ಹೊಸ ಆಸೆಯು ಚಿಗುರಿ,ಬಾಗಿಲ ಬಳಿ ನಿಂತಾಗ ನೀ ಬರಲಿಲ್ಲ,
ಮನವೆಂಬ ಹೂ,ಭ್ರಮರಕ್ಕಾಗಿ ದು:ಖಿಸಿತ್ತಲ್ಲ.

ಹೂ ಮುದುಡುವ ಸಮಯದಲಿ ,ಬಂದೆ ನೀ ಅಲ್ಲಿ
ಆಸೆಯೂ ಚಿಗುರಿತು ,ಮತ್ತೆ ಹೂ ಅರಳಿತು.
ನೀ ಪ್ರೀತಿಯ ನಗೂ ಚೆಲ್ಲಿದಾಗ , ಮನವೂ ಹೇಳಿತಾಗ
ಈ ಒಂದು ನಗುವಿಗಲ್ಲವೇ, ನೀ ಹಗಲಿರುಳು ಕಾದ್ದಿದ್ದೆಯಲ್ಲ.