
ಈ ಪ್ರೀತಿ.. ಪ್ರೇಮಾ.... ಅನ್ನೋದರ ಬಗ್ಗೆ ನನಗೆ ಅಷ್ಟು ಒಲವು ಇಲ್ಲಾ ಅನ್ನೋದ್ಕಿಂತಾ ನನಗದು ಗೊತ್ತಿಲ್ಲ....ಈ ಮೊದಲ ನೋಟದಲ್ಲೆ ಪ್ರೇಮ ಹುಟ್ಟಿತು..ಇದು ನನ್ನ ತಲೆಗೆ ಇನ್ನು ಅರ್ಥವಾಗದ ವಿಚಾರ..ಗೊತ್ತಿಲ್ಲದ ಒಂದು ಮುಖ ಅಹ್ದೇಗೆ ಇಷ್ಟ ಆಗುತ್ತೆ??ನನಗೆ ಈ ಪ್ರೀತಿ ಅನ್ನೋದು ಒಂದು ರೀತಿಯ ಆರ್ಕಷಣೆ ಅಂತಾ ಅನ್ನಿಸುತ್ತದೆ.... ನಮ್ಮ ಸುತ್ತ-ಮುತ್ತಲಿನ ಅದೇಷ್ಟೋ ಜನಗಳ ಮದ್ಯೆ ಒಂದು ಜೀವಕ್ಕೆ ಮಾತ್ರ ಮನ ಸೋಲೋದು ಅಂದ್ರೆ.....ಅದೇ ಪ್ರೀತಿನಾ??
ಹೀಗೆ ನನ್ನ ಗೆಳತಿ ಹೇಳಿದ್ಲು, I'm in Love... ನನಗೆ ಒಂದು ನಿಮಿಷ ಏನು ಹೇಳಬೇಕು ಅಂತಾ ಗೊತ್ತಾಗಲಿಲ್ಲ....ಆದ್ರೂ congrats ಅಂದೆ...ಅದ ಕೇಳಿ ಅವನು ಇನ್ನು ಒಪ್ಪಿಲ್ಲಾ...ಅಂತಾ ಸಣ್ಣ ದ್ವನಿಯಲ್ಲಿ ಹೇಳಿದಾಗ... ನನಗೆ ಇಂತಾ ಒಳ್ಳೆ ಹುಡಗಿನಾ ಯಾಕ್ ಒಪ್ಪಕೊಂಡಿಲ್ಲಾ?? ಅನ್ನೋ ಪ್ರಶ್ನೆ ತಲೆಯೊಳಗೆ ಬಂತು....
ಅವಳ ಮಾತಾಡೋ ರೀತಿ ನೋಡಿ/ಕೇಳಿ ಗೆಳತನ ಬಯಸಿದ್ದು ಇನ್ನು ನನಗೆ ನೆನಪಿದೆ...ಈ ದಿನ ಪೂರ್ತಿ ಅವನ ಬಗ್ಗೆ ಹೇಳಿದಾಗ ನನಗೆ ಅವನ ಮೇಲೆ ಸಿಟ್ಟು ಬಂತು... ಆದರೂ ಅವಳಿಗೆ ಹೇಳೊ ಮನಸ್ಸು ಮಾಡಲಿಲ್ಲಾ... (ಇದನ್ನು ಓದಿ...ಬೈತಾಳೆ ಅಂತಾ ಮಾತ್ರ ಗೊತ್ತು).... ಕೊನೆಗೆ ಆ ಸಿಟ್ಟು ಮಾಯವಾಗಿ ಇವಳ ಮೇಲೆ ಕನಿಕರ ಬಂತು...ಅವಳ ಮೌನ ನನಗೂ ಬಂತು...ಆದರೂ ಮನಸ್ಸಿನಲ್ಲಿ ಇವಳು ಹೇಳೂ ರೀತಿಯಲ್ಲಿ ಹೇಳಿಲ್ಲಾ... ಯಾವಾಗಲೋ ನಗುತ್ತಾ,ಜೋಕ್ ಮಾಡುತ್ತ ಈ ವಿಷಯ ಹೇಳಿರ್ತಾಳೆ ಅನಿಸಿತು.ಅವನ ಬಗ್ಗೆ ಹೇಳುತ್ತಿರುವಾಗ ನನಗೆ ಇವಳ ಮೇಲೆ ಸಿಟ್ಟು...ಅವನಿಗೂ ನನ್ನ ಮೇಲೆ ಪ್ರೀತಿ ಇದೆ ಅಂತಾ ತನಗೆ ತಾನೆ ಹೇಳುವಾಗಲಂತೂ ಫೊನ್ ಕಟ್ ಮಾಡೋ ಅಷ್ಟು ನಿರಾಸಕ್ತಿ...ಅವನು ನನ್ನ ಹತ್ತಿರ ಪ್ರೀತಿಯಿಂದ ಮಾತಾಡ್ತಾನೆ..ಆದ್ರೆ ಪ್ರೀತಿ ಅಂದ್ರೆ ಗೊತ್ತಿಲ್ಲಾ ಅಂತ್ತಾನೆ...ಹೇಗಾದರೂ ಮಾಡಿ ಒಪ್ಪಿಸುತ್ತೀನಿ..ಇಲ್ಲಾ ಅಂದ್ರೆ ಮುಂದೆ ಗೊತ್ತಿಲ್ಲಾ ಅಂತಾ ಹೇಳೊವಾಗ ನಾನು ಫೊನ್ ಹಿಡಿದ್ಕೊಂಡಿರೋ ಕಿವುಡ.....ನಾನು ಇನ್ನು ಸ್ವಲ್ಪ ಚೆನ್ನಾಗಿ ಇದ್ದಿದ್ರೆ ಇಷ್ಟಪಡತ್ತಿದ್ದೇನೊ ಅಂದಾಗ...ಪ್ರೀತಿ ಅಂದ್ರೆ ಏನು?? ಪ್ರೀತಿ ಅನ್ನೋದು ಬರಿ ದೈಹಿಕ ಆರ್ಕಷಣೆನಾ?? ಅಥವಾ ಎರಡು ಮನಸ್ಸಿನ ಒಂದು ಮಾಡುವ ಶಕ್ತಿನಾ?? ಪ್ರೀತಿ ಬರಿ ಆರ್ಕಷಣೆ ಆಗಿದ್ದರೆ... ಲೈಲಾ ಮಜ್ನು ಪ್ರೀತಿಗೆ ಎನ್ ಅಂತಾ ಕರಿಯೋದು?? ಲೈಲಾ ಕುರುಪಿ....ಮಜ್ನು ಕುಬ್ಜ , ಭಿಕಾರಿ....ಆದರೂ ಜನ ತಮ್ಮ ಪ್ರೀತಿನ ಅವರ ಪ್ರೀತಿಗೆ ಹೋಲಿಸುತ್ತಾರೆ.ಅವರ ಹಾಗೆ ನಾವು ಅಂತಾರೆ.....
ನಾನು ನೋಡಿದ ಒಂದು ಅಪರೂಪದ ಪ್ರೀತಿ..ಸಂಜಯ ಅವರದು... ಒಳ್ಳೇ ಕೆಲಸ ...ನೋಡಲು ಸುರಧ್ರುಪಿ...ಹಣವಂತ...ಒಮ್ಮೆ ಅವರ ಮನೆಗೆ ಗೋವಿಂದಾಚಾರ್ಯ ಜೊತೆ ಹೋಗಿದ್ದೆ... ಅವರ ತಮ್ಮನ ಮದುವೆ ಅಂತಾ...ಆಚಾರರೇ ಮದುವೆ ಪುರೋಹಿತ ಆದ್ದರಿಂದ ಮದುವೆಗೆ ಬೇಕಾದ list ಕೊಡಲು ಹೋಗಿದ್ದ್ವಿ...ನಾವು ಹೋದ ಕೂಡಲೆ...ಅವರ ೩ ವರ್ಷದ ಮಗಳು ಓಡಿ ಬಂದು.. ಅಪ್ಪ......ಅಮ್ಮ ಕರಿತ್ತಾಳೆ ಅಂದ್ಲು...ಅವರ ಮಗಳ ಮುಖ ನೋಡಿ ಏನೋ ಒಂದು ಖುಷಿ...ಆದರೆ ಆ ಖುಷಿ ೨ ನಿಮಿಷದಲ್ಲಿ ಮಾಯ... ಸಂಜಯ ಯಾರನ್ನೋ ಎತ್ತಿಕೊಂಡು ಬಂದರು...ಅದು ಅವರ ಹೆಂಡತಿ...ಅಂಗವಿಕಲೆ....ಅವರ ಕಾಲುಗಳೇ ಇರಲಿಲ್ಲಾ...ಅವರು ನಗುತ್ತಾ ಎಲ್ಲರೊಡನೆ ಮಾತಾಡುತ್ತಿದ್ದರೆ ನನಗೆ ಅವರನ್ನು ನೋಡಿ ನನ್ನ ನಗು ಮುಖದಲ್ಲೆ ಸತ್ತು ಹೋಯ್ತು....ವಾಪಸ್ಸು ಮನೆಗೆ ಬರುವಾಗ ನನ್ನ ಮೌನ ನೋಡಿ "ಅವರಿಬ್ಬರದು love marriage " ಅಂದ್ರು ಗೋವಿಂದಾಚಾರ್ಯ....ನಾನು ಅವರ ಮುಖ ನೋಡಿ ಸುಮ್ಮನಾದೆ... ಅವರ ಮಾತು ಮುಂದುವರೆಯಿತು...ಸಂಜಯ ಜೊತೆನೆ ಕೆಲಸ ಮಾಡ್ತಾಇದ್ದರು...ಅಪ್ಪ ಅಮ್ಮ ಏನು ಹೇಳಿದರು ಕೇಳದೆ ಮದುವೆ ಆದ್ರು...ಒಂದೇ ಜಾತಿ ಆದ್ದರಿಂದ ಬೇರೆ ಪ್ರಾಬ್ಲೆಮ್ ಬರಲಿಲ್ಲಾ ಅಂದ್ರು !!!!????...ನಾವು ಬರೋ ಮುಂಚೆ ಅವರು ಹೇಳಿದ ಮಾತು.."ನನಗೆ ೨ ಹೆಣ್ಣು ಮಕ್ಕಳು...ಒಂದಕ್ಕೆ ೩ ವರ್ಷ,ಇನ್ನೊಂದಕ್ಕೆ ೩೦ ವರ್ಷ " ಅಂತಾ ನಕ್ಕರು...ಅವರ ನಗುವಿನಲ್ಲಿ ನನಗೆ ಏನು ನೋವು,ದುಖ: ಕಾಣಲಿಲ್ಲ.... ಅವಳ ಊನ ನೋಡಿ ನಾನು ಮದುವೆ ಆಗಲಿಲ್ಲಾ... ಹಾಗಿದ್ದರೂ ನಾನು ಯಾರಿಗಿಂತಲೂ ಕಡಿಮೆ ಅಲ್ಲಾ ಅನ್ನೋ ಧೈರ್ಯ ನೋಡಿ ಪ್ರೀತಿ ಮಾಡಿದೆ ಅಂತಾ ಹೆಮ್ಮೆಯಿಂದಾ ಹೇಳೋವಾಗ ಅವರ ಬಗ್ಗೆ ಗೌರವ ಹೆಚ್ಚಾಯಿತು.... ಪ್ರೀತಿ ಅಂದ್ರೆ ಇದೇನಾ??
ನೋಡಲು ಚೆನ್ನಾಗಿ ಇರೋರ್ನಾ ಪ್ರೀತಿ ಮಾಡಿದ್ರೆ... ಹೇಗೆ?? ಎಲ್ಲಾರಿಗೂ ಮನಸು,ಆಸೆ ಇರುತ್ತೆ ಅಲ್ವಾ?? ಆ ಪ್ರೀತಿನಾ ಅರ್ಥ ಮಾಡಕೊಳ್ಳಲಾಗದಷ್ಟು ಮುರ್ಖರಾ?? ಪ್ರೀತಿ ಬಗ್ಗೆ ಹೇಳ್ತಾರೆ...ಆದ್ರೆ ನನ್ನ ಹೆಂಡತಿ ಮಾತ್ರ ರಂಬೆ ತರಾ ಇರಬೇಕು,ನನ್ನ ಗಂಡ ಮನ್ಮಥ ತರಾ ಇರಬೇಕು ಅಂತಾ ಆಸೆ ಪಡ್ತಾರೆ... ಆಮೇಲೆ ತಾವು ರಂಬೆ/ಮನ್ಮಥ ಅಲ್ಲಾ ಅಂತಾ ಗೊತ್ತಾದ ಮೇಲೆ ಸುಮ್ಮನಾಗ್ತಾರೆ... ಇಷ್ಟೆಲ್ಲಾ ಬರೆಯೋ ಹೊತ್ತಿಗೆ ಗೆಳತಿ ಫೊನ್ ಬಂತು ...ಮತ್ತೆ ಅದೇ ರಾಗ ...ಅದೇ ಹಾಡು.... ಪ್ರೀತಿ ಅಂದ್ರೆ ಇದೇನಾ???
1 comment:
ವಾಹ್ !! ನಿಜಕ್ಕೂ ಮನಸ್ಸಿಗೆ ಹೃದಯಕ್ಕೆ ಟಚ್ ಆಯಿತು ಕಣ್ರೀ! ಪ್ರೀತಿ ಅಂದ್ರೆ ಅದೇ ಕಣ್ರೀ!
ನಿಜಕ್ಕೂ "ನನಗೆ ೨ ಹೆಣ್ಣು ಮಕ್ಕಳು...ಒಂದಕ್ಕೆ ೩ ವರ್ಷ,ಇನ್ನೊಂದಕ್ಕೆ ೩೦ ವರ್ಷ " ಇದು ಎಂಥ ಮಾತು! ಇಂಥ ಜನ/ಪ್ರೀತಿ ಇನ್ನೂ ಈ ಜಗತ್ತಿನಲ್ಲಿ ಇದ್ದಾರಾ/ಇದೆಯಾ!?
Post a Comment