Saturday, November 1, 2008

ಸಂಜೆ...




ನೇಸರನ ಗಲ್ಲಕೆ ಮುತ್ತಿಕ್ಕುವ ಆ ಬೆಟ್ಟದ ತುದಿ
ಅದ ಸವಿದು ನೇಸರನ ಕಣ್ಣು ಕೆಂಪಾಗಿ...
ಸಿಟ್ಟಿನಲಿ ತಾ ಹೊರಟಿಹನು ತನ್ನ ಮನೆಯೆ ಕಡೆಗೆ...
ಇದನರಿತು ಹಕ್ಕಿಗಳು ತವಕದಲಿ ಗೂಡ ಸೇರತೀರಲು....

ಗೋಧೂಳಿಯ ಸಮಯದ ಧೂಳು ಎದ್ದಿರಲು
ಕೊಳಲನುದುತಾ ಅವ ತನ್ನ ಗೋಗಳ ಕರೆದಿರಲು...
ಸಂಜೆಗೆಂಪು ಬಣ್ಣದಲಿ ಅವಳ ಮಲ್ಲೆ ಕಂಪು ಹರಡಿರಲು...
ನಲ್ಲನ ಅಗಲಿಕೆಯ ದು:ಖದಲಿ ಸೂರ್ಯಕಾಂತಿ ತಾ ಸೋತಿರಲು...

ಹಕ್ಕಿಗಳ ಕಲರವದಲಿ ಸಖಿಯ ಹಾದಿಯ ಅವ ಕಾದಿರಲು
ಅವಳು ಕರೆದ ಹೆಸರು ಕೋಗಿಲೆ ದನಿಯ ಮೀರಿಸಿರಲು...
ತಿರುಗಿ ತಾ ನೋಡಲು ಸಖಿಯ ಗಲ್ಲದಲಿ ಕೆಂಪು ಮುಡಿರಲು...
ಅವಳ ಸನಿಹ ಸುಖ ಬಯಸಿ ಹೋಗಿರಲು ಅಲ್ಲಿಗೆ ಕತ್ತಲಾಗಿತ್ತು...

ನೆನ್ನೆಯ ಸವಿಯ ನೆನೆದು ನೇಸರನು ಖುಷಿಯಲಿ ತಾ ಬರಲು..
ಮರಿಗಳ ಹಸಿವು ನೀಗಿಸಲು ಹಕ್ಕಿಗಳು ಹೋರಟಿರಲು...
ನಲ್ಲ ಬರುವುದ ಅರಿತು ಹೂ ಮತ್ತೆ ಸಿಂಗಾರಗೊಂಡಿರಲು...
ಅವಳ ಅದರ ಸವಿದ,ಸಖ ಮತ್ತೆ ಭ್ರಮರವಾಗಿ ಸುತ್ತುತಿಹನು....

1 comment:

ಗೌತಮ್ ಹೆಗಡೆ said...

naanu oadida ella nimma kavana khushi kottavu.heege bareeta iri:)