
ನನ್ನವಳಲ್ಲದ ನನ್ನವಳಿಗೆ ಬರೆದ ಈ ಪ್ರೇಮ ಪತ್ರ
ಮನದಾಳದ ತುಮುಲಗಳ ಒಂದುಗೂಡಿಸಿ
ದಿನಕೊಮ್ಮೆಯಾದರು ನಿನ್ನ ನೋಡಬಯಸಿ
ಆಗದೆಂದು ನೀ ನನ್ನಿಂದ ದೂರಸರೆದ
ಕಾರಣವ ಕೇಳಲೆಂದು ಬರೆದ ಈ ಪತ್ರ
ನಿನ್ನ ನೋಡದಿದ್ದರೇನು ದನಿ ಕೇಳಲೆಂದು
ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿ
ನನ್ನ ಕಾಡಬೇಡ ಹೇಳಿದ್ದು ನೆನಪಾಗಿ
ಕಾರಣವ ಕೇಳಲೆಂದು ಬರೆದ ಈ ಪತ್ರ
ಇನ್ನು ನಿನ್ನ ನೋಡುವುದಿಲ್ಲ,ಕಾಡುವುದಿಲ್ಲ
ಪ್ರೀತಿಯ ಆಸೆಗೆ ಹಂಬಲಿಸುವುದಿಲ್ಲ
ಎಲ್ಲೊ ಮನಸಿನ ಪ್ರಶ್ನೆ ಕೇಳಲೆಂದು
ನನ್ನವಳಲ್ಲದ ನನ್ನವಳಿಗೆ ಬರೆದ ಈ ಪ್ರೇಮ ಪತ್ರ