
ನನ್ನವಳಲ್ಲದ ನನ್ನವಳಿಗೆ ಬರೆದ ಈ ಪ್ರೇಮ ಪತ್ರ
ಮನದಾಳದ ತುಮುಲಗಳ ಒಂದುಗೂಡಿಸಿ
ದಿನಕೊಮ್ಮೆಯಾದರು ನಿನ್ನ ನೋಡಬಯಸಿ
ಆಗದೆಂದು ನೀ ನನ್ನಿಂದ ದೂರಸರೆದ
ಕಾರಣವ ಕೇಳಲೆಂದು ಬರೆದ ಈ ಪತ್ರ
ನಿನ್ನ ನೋಡದಿದ್ದರೇನು ದನಿ ಕೇಳಲೆಂದು
ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿ
ನನ್ನ ಕಾಡಬೇಡ ಹೇಳಿದ್ದು ನೆನಪಾಗಿ
ಕಾರಣವ ಕೇಳಲೆಂದು ಬರೆದ ಈ ಪತ್ರ
ಇನ್ನು ನಿನ್ನ ನೋಡುವುದಿಲ್ಲ,ಕಾಡುವುದಿಲ್ಲ
ಪ್ರೀತಿಯ ಆಸೆಗೆ ಹಂಬಲಿಸುವುದಿಲ್ಲ
ಎಲ್ಲೊ ಮನಸಿನ ಪ್ರಶ್ನೆ ಕೇಳಲೆಂದು
ನನ್ನವಳಲ್ಲದ ನನ್ನವಳಿಗೆ ಬರೆದ ಈ ಪ್ರೇಮ ಪತ್ರ
6 comments:
sir! tumba tumba senti poem :'(
ಏನಿದು ಕೇವಲ ತಮ್ಮ ಅಂತರಾಳದ ಮಾತೋ !?
ಅಥವಾ ತಮ್ಮ ಜೀವನದ ಸತ್ಯಘಟನೆಯೋ!?
ಕೇಳಬೇಕೋ ಕೇಳಬಾರದೋ ! ತಿಳಿಯದೆ
ಕೇಳಬೇಕೆಂದು ಬರೆದ ಈ COMMENTU !!
blueyeee chenagide, tumba chenagide i loved it
- *aryan*
hiiii bluuu ... sakathadagide kavana.. nin thara ne senti agi... bega bega ninnavalige question kelbidu aita.... ----from MANASI..
Superb! ur so talented.
Anitha
Ninnavallada ninnavalu bega ninnavalagi bandu nijavda prema patra bareyali guru
Post a Comment