
ಮನದ ಮೂಲೆಯಲಿ
ಪುಟ್ಟದಾದ ಒಂದು ಗೂಡು ಕಟ್ಟಿ
ಕರೆದೆ ನಿನ್ನ ಪ್ರೀತಿಯ ಕನಸು ಹೆಣೆಯಲು ..
ನಿನ್ನ ಅಂತರಂಗದ ಆಸೆಗಳ
ಜೊತೆಗೂಡಿಸಿ, ಬಣ್ಣವೆಂಬ ಬದಕು ಬೆರಸಿ
ಅರಳಲಿ ನಮ್ಮ ಪ್ರೀತಿಯ ಹೂ ಅಲ್ಲಲ್ಲಿ
ಮಧ್ಯ ನೆನಪಿನ ಪಿಸಿಮಾತಿನ ಸೋನೆ
ನಲ್ಲೆ ಕೊಟ್ಟ ಬಿಸಿ ಮುತ್ತಿನ ಮಾಲೆ..
ಇನ್ನು ಎಷ್ಟು ಆಡಿದರು ಸಾಕಗಿರಲಿಲ್ಲ..
ಮಾತು, ಪ್ರೀತಿಯೆಂಬ ಆರಿದ್ರ ಮಳೆಗೆ ಬರವಿರಲಿಲ್ಲ..
ದಿನಕೊಮ್ಮೆ ಆಗಲೋ ಇಗಲೋ ಒಮ್ಮೆ ಹುಸಿಮುನಿಸು
ಮಾತನಾಡಲಾಗಂಥಹ ಬಿಗು ಮೌನ..ಮತ್ತೆ ವಿರಾಮ.
ಈ ಕನಸಿನ ಗೂಡಿಗೆ ಎಲ್ಲಿಂದಲೋ ಬಿತ್ತು ಬೆಂಕಿ
ಪ್ರಶ್ನೆ ಉತ್ತರದ ಪರಿವೆ ಇಲ್ಲದ ಆ ಮಾತುಗಳ ಕಿಡಿ
ನಿಶ್ಯಬ್ಧ, ನಿಟ್ಟುಸಿರು,ಮತ್ತೆ ಮೌನವಾದ ಹನಿಕೂಡಿದ ಕಣ್ಣುಗಳು
ಕನಸಿನ ಗೂಡ ಹೆಣೆಯಲು ಬೇಸೆತ್ತ ಹೃದಯಗಳು ..
ಮನದ ಅಂಗಳದಲಿ ಅಲ್ಲಲ್ಲಿ ಬಿದ್ದ ಆಸೆಗಳು
ಎತ್ತಿ ಮತ್ತೆ ಹೊಸೆಯಲು ಆಗದ ನಿಷ್ಪ್ರಯೋಜಕ ಕನಸುಗಳು
ಒಮ್ಮೆಯಾದರು ಹಿಂತಿರುಗಿ ಬಾ ಕಾಯುವೆ ಎಂಬ ಮಾತುಗಳು
ದಿನ ದಿನವು ಹೆಚ್ಚಿದ ಬೆಂಕಿಯ ಜ್ವಾಲೆಯಂಥ ನೆನಪುಗಳು ......
1 comment:
ಬೆಂಕಿ ಬಿದ್ದರೆನಂತೆ! ಭಗವಂತನಿಲ್ಲವೇ!
ಬುಡಕ್ಕೆ ನೀರು ಬಿಟ್ಟು ಬೆಂಕಿಯ ನಂದಿಸಲು!
ಆತ್ಮವಿಶ್ವಾಸ ಕಳೆದುಕೊಳ್ಳದೆ ಸಣ್ಣ ಗೂಡು ಏಕೆ!
ಸುಂದರ ತಾಜ್ ಮಹಲನ್ನೇ ಕಟ್ಟು ಗೆಳೆಯ ! :)
Post a Comment